Posts

Showing posts from October, 2025

ತ್ವರೀಖತ್ ಸತ್ಯ ಮತ್ತು ಮಿಥ್ಯ ವಿಶೇಷ ತರಗತಿ

Image
ಸುನ್ನೀ ಜಂಇಯ್ಯತುಲ್ ಉಲಮಾ ಎಸ್ ಜೆ ಯು ಉಳ್ಳಾಲ ಝೋನ್ ವತಿಯಿಂದ ತ್ವರೀಖತ್ ಸತ್ಯ ಮತ್ತು ಮಿಥ್ಯ ಎಂಬ ವಿಷಯದಲ್ಲಿ ವಿಶೇಷ ಸಂಗಮ ಉಳ್ಳಾಲ ಸಯ್ಯಿದ್ ಮದನಿ ದರ್ಗಾ ವಠಾರದ ಮದನಿ ಹಾಲ್ ನಲ್ಲಿ ನಡೆಯಿತು.  ಉಳ್ಳಾಲ ಝೋನ್ ಉಪಾಧ್ಯಕ್ಷರಾದ ಶರೀಫ್ ಸಅದಿ ಕಲ್ಲಾಪು ಅಧ್ಯಕ್ಷತೆ ವಹಿಸಿದರು. ಉಳ್ಳಾಲ ಕೋಡಿ ಬದ್ರ್ ಜುಮಾ ಮಸ್ಜಿದ್ ಖತೀಬರಾದ ಆದಂ ಫೈಝಿ ದುಆ ನೆರವೇರಿಸಿದರು. ಝೋನ್ ಕೋಶಾಧಿಕಾರಿ ಸಭೆಯನ್ನು ಉದ್ಘಾಟಿಸಿದರು. ಝೋನ್ ಪ್ರಧಾನ ಕಾರ್ಯದರ್ಶಿ ಮುನೀರ್ ಸಖಾಫಿ ಸಾಲೆತ್ತೂರು ತ್ವರೀಖತ್ ಸತ್ಯ ಮತ್ತು ಮಿಥ್ಯ ಎಂಬ ವಿಷಯದಲ್ಲಿ ಸಮಗ್ರವಾದ ತರಗತಿ ನಡೆಸಿದರು. ಸಭೆಯಲ್ಲಿ ಹಿರಿಯ ವಿದ್ವಾಂಸರಾದ ಅಬೂ ಝಿಯಾದ್ ಮದನಿ ಪಟ್ಟಾಂಬಿ ಉಸ್ತಾದ್, ಡಾ. ಎಮ್ಮೆಸ್ಸೆಂ ಅಬ್ದುರ್ರಶೀದ್ ಝೈನಿ ಕಾಮಿಲ್ ಸಖಾಫಿ, ಎಸ್ ಜೆ ಎಂ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ ಎಂ ಮದನಿ, ಉಸ್ಮಾನ್ ಮದನಿ ಉಳ್ಳಾಲ, ಝೋನ್ ಜೊತೆ ಕಾರ್ಯದರ್ಶಿ ಯೂನುಸ್ ಇಮ್ದಾದಿ ಅಲ್ ಫುರ್ಖಾನಿ ಸಹಿತ ಝೋನ್ ನಾಯಕರು, ಸದಸ್ಯರು ಭಾಗವಹಿಸಿದರು. ಝೋನ್ ಜೊತೆ ಕಾರ್ಯದರ್ಶಿ ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಸ್ವಾಗತಿಸಿದರು.